Advertisement

Responsive Advertisement

ರಿಪ್ಪನ್‌ಪೇಟೆಯ ಶ್ರೀ ಸಿದ್ಧಿ ವಿನಾಯಕ ಹಾಗೂ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅಕ್ಟೋಬರ್ 11 ರಿಂದ ಶರನ್ನವರಾತ್ರಿ ಮಹೋತ್ಸವ: ಸಮಸ್ತ ಭಕ್ತಾದಿಗಳಿಗೆ ಆತ್ಮೀಯ ಆಹ್ವಾನ!


ಅನಿಸಿಕೆ ನ್ಯೂಸ್ (ರಿಪ್ಪನ್‌ಪೇಟೆ):

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ಸ್ವಸ್ತಿಶ್ರೀ ಪರಾಭವನಾಮ ಸಂವತ್ಸರದ ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯ, ಅಂದರೆ ಇದೇ ಅಕ್ಟೋಬರ್ 11 ಭಾನುವಾರದಿಂದ ಅಕ್ಟೋಬರ್ 21 ಬುಧವಾರದವರೆಗೆ ಶರನ್ನವರಾತ್ರಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಈ ಪವಿತ್ರ ಧಾರ್ಮಿಕ ಉತ್ಸವದಲ್ಲಿ ರಿಪ್ಪನ್‌ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಸಮಸ್ತ ಗ್ರಾಮಸ್ಥರು ಮತ್ತು ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ, ತನು-ಮನ-ಧನಗಳ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪನಾ ಸಮಿತಿಯು ಕೋರಿದೆ.

ದಿನಂಪ್ರತಿ ಜರುಗುವ ಪೂಜಾ ಕಾರ್ಯಕ್ರಮಗಳ ವಿವರ:

  • ಅಕ್ಟೋಬರ್ 11 (ಭಾನುವಾರ) ದಿಂದ ಅಕ್ಟೋಬರ್ 20 (ಮಂಗಳವಾರ) ರವರೆಗೆ:

    ಪ್ರತಿದಿನ ಬೆಳಿಗ್ಗೆ: ಪ್ರಾತಃಕಾಲ ಪೂಜೆ.

    ಬೆಳಿಗ್ಗೆ 9.30 ರಿಂದ: ಶ್ರೀ ಅನ್ನಪೂರ್ಣೇಶ್ವರೀ ಸನ್ನಿಧಾನದಲ್ಲಿ "ಚಂಡಿಕಾ ಪಾರಾಯಣ"

    ಮಧ್ಯಾಹ್ನ12.30 ಕ್ಕೆ: ಮಹಾಪೂಜೆ ಹಾಗೂ ಮಂಗಳಾರತಿ ಪ್ರಸಾದ ವಿನಿಯೋಗ.

    ವಿಶೇಷ ಉತ್ಸವ ದಿನಗಳು:

     ಅಕ್ಟೋಬರ್ 14 (ಬುಧವಾರ) – ಸಾಮೂಹಿಕ ರಂಗಪೂಜೆ:

    • ಸಂಜೆ 5.30 ರಿಂದ ಶ್ರೀ ಸಿದ್ಧಿ ವಿನಾಯಕ ದೇವರ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ಸಾಮೂಹಿಕ ರಂಗಪೂಜೆ, ಮಹಾಪೂಜೆ, ಉತ್ಸವ ಬಲಿ, ಪ್ರಾಕಾರೋತ್ಸವ, ಉಯ್ಯಾಲೋತ್ಸವ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗಲಿದೆ.

      ವಿಶೇಷ ಸೇವಾಕರ್ತರು: ಅಕ್ಟೋಬರ್ 14 ರ ಸಾಮೂಹಿಕ ರಂಗಪೂಜೆಯ ಸೇವೆಯನ್ನು ಶ್ರೀ ಜಿ. ರಾಮದಾಸ ನಾಯಕ್ ಮತ್ತು ಮಕ್ಕಳು ಹಾಗೂ ಕುಟುಂಬದವರು (ನಾಯಕ್ ಗ್ರೂಪ್ಸ್, ರಿಪ್ಪನ್‌ಪೇಟೆ) ನೆರವೇರಿಸಲಿದ್ದಾರೆ.

       ಅಕ್ಟೋಬರ್ 21 (ಬುಧವಾರ) – ವಿಜಯದಶಮಿ, ನವ ಚಂಡಿಕಾ ಹೋಮ ಹಾಗೂ ರಥೋತ್ಸವ:

      ಬೆಳಿಗ್ಗೆಯಿಂದ: ಉದಯ ಪೂಜೆ, ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ವಾಚನ, ಮಂಡಲ ದರ್ಶನ, ಋತ್ವಿಗ್ ವರಣೆ ಮತ್ತು "ನವ ಚಂಡಿಕಾ ಹೋಮ" ಪ್ರಾರಂಭವಾಗಲಿದೆ.

      ಮಧ್ಯಾಹ್ನ 12:೦೦ ಕ್ಕೆ: ನವ ಚಂಡಿಕಾ ಹೋಮದ ಪೂರ್ಣಾಹುತಿ.

      ಮಧ್ಯಾಹ್ನ: ತೀರ್ಥಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ.

      ಸಂಜೆ 4:೦೦ ಗಂಟೆಯಿಂದ: ಬನ್ನಿ ಪೂಜೆ ಹಾಗೂ ಶ್ರೀ ದೇವರ ಭವ್ಯ ರಥೋತ್ಸವ.

      (ರಥೋತ್ಸವ ಸಾಗುವ ಮಾರ್ಗ: ದೇವಾಲಯದಿಂದ ಬನ್ನಿಮಂಟಪ ಹಾಗೂ ವಿನಾಯಕ ವೃತ್ತದವರೆಗೆ).

      ಭಕ್ತಾದಿಗಳ ಸೇವಾ ವಿವರ ಹಾಗೂ ಶುಲ್ಕ:

      ಸೇವೆಗಳನ್ನು ಮಾಡಿಸಲು ಇಚ್ಛಿಸುವ ಭಕ್ತರು ನಿಗದಿತ ಸೇವಾ ಶುಲ್ಕವನ್ನು ದೇವಾಲಯದ ಕಚೇರಿಯಲ್ಲಿ ಪಾವತಿಸಿ ರಶೀದಿ ಪಡೆದುಕೊಳ್ಳಬಹುದು:

      ಚಂಡಿಕಾ ಪಾರಾಯಣಕ್ಕೆ (ಅ. 11 ರಿಂದ 20 ರವರೆಗೆ): ರೂ. 1000/-

      ಸಾಮೂಹಿಕ ರಂಗಪೂಜೆಗೆ (ಅ. 14 ರಂದು): ರೂ. 500/- (ಸಂಕಲ್ಪ ಸಮಯ: ಸಂಜೆ 5.30)

      ನವ ಚಂಡಿಕಾ ಹೋಮಕ್ಕೆ (ಅ. 21 ರಂದು): ರೂ. 500/- (ಸಂಕಲ್ಪ ಸಮಯ: ಬೆಳಿಗ್ಗೆ 9.30)

      ವಿಶೇಷ ಸೂಚನೆ: ನವ ಚಂಡಿಕಾ ಹೋಮದ ಪೂರ್ಣಾಹುತಿಗೆ ಭಕ್ತಾದಿಗಳು ದ್ರವ್ಯಗಳನ್ನು (ರವಿಕೆ ಕಣ, ಕಾಯಿ, ದ್ರಾಕ್ಷಿ, ಗೋಡಂಬಿ, ಉತ್ತುತ್ತೆ, ಕಲ್ಲುಸಕ್ಕರೆ) ಅಕ್ಟೋಬರ್ 21 ರ ಬೆಳಿಗ್ಗೆ 11.20ರ ಒಳಗಾಗಿ ಸಮರ್ಪಿಸಬಹುದು.

      ಆಹ್ವಾನಿಸುವವರು:

      • ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ, ಹೊಸನಗರ

        ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ಸಿದ್ಧಿ ವಿನಾಯಕ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀ ಸಿದ್ಧಿ ವಿನಾಯಕ ಸೇವಾ ಸಂಸ್ಥೆ (ರಿ)

        ಉಪ ಸಮಿತಿಗಳ ಸಂಚಾಲಕರು, ಸರ್ವ ಸದಸ್ಯರು, ಶ್ರೀ ದೇವಸ್ಥಾನದ ಸಿಬ್ಬಂದಿ ವರ್ಗ ಹಾಗೂ ರಿಪ್ಪನ್‌ಪೇಟೆ ಗ್ರಾಮಸ್ಥರು

        📞 ಹೆಚ್ಚಿನ ಮಾಹಿತಿ ಹಾಗೂ ಸೇವಾ ವಿವರಗಳಿಗೆ ಸಂಪರ್ಕಿಸಿ: 9945842157



📢 ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಸೋಶಿಯಲ್ ಮೀಡಿಯಾಗಳಿಗೆ ಜಾಯಿನ್ ಆಗಿ!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು