Advertisement

Responsive Advertisement

ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗೋವುಗಳಿಗೆ ಭೀಕರ ವಾಹನ ಡಿಕ್ಕಿ: ಸ್ಥಳದಲ್ಲೇ ಎರಡು ಹಸುಗಳು ಸಾವು, ಎರಡು ಗೋವುಗಳಿಗೆ ಗಂಭೀರ ಗಾಯ

 




ಅನಿಸಿಕೆ ನ್ಯೂಸ್ (ರಿಪ್ಪನ್‌ಪೇಟೆ):

ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಗೋವುಗಳು ತೀವ್ರವಾಗಿ ಗಾಯಗೊಂಡಿದ್ದು, ಈ ಪೈಕಿ ಎರಡು ಗೋವುಗಳು ರಸ್ತೆಯಲ್ಲೇ ನರಳಾಡಿ ಕೊನೆಯುಸಿರೆಳೆದಿವೆ. ಅಪಘಾತವೆಸಗಿದ ಅಪರಿಚಿತ ವಾಹನದ ಚಾಲಕ ಸ್ಥಳದಿಂದ ವಾಹನದೊಂದಿಗೆ ಪರಾರಿಯಾಗಿದ್ದಾನೆ.


ರಾತ್ರಿ ವೇಳೆ ರಸ್ತೆಯಲ್ಲಿದ್ದ ಹಸುಗಳ ಹಿಂಡಿಗೆ ವೇಗವಾಗಿ ಬಂದ ವಾಹನವೊಂದು ಅಪ್ಪಳಿಸಿದೆ. ಡಿಕ್ಕಿಯ ಭೀಕರತೆಗೆ ಎರಡು ಗೋವುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು,  ಮೃತಪಟ್ಟ ಗೋವುಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಉಳಿದೆರಡು ಗೋವುಗಳು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದವು.


ಸ್ಥಳೀಯರಿಂದ ಪ್ರಾಥಮಿಕ ಚಿಕಿತ್ಸೆ – ಕೆನರಾ ಬ್ಯಾಂಕ್ ಎದುರು ರಕ್ಷಣೆ:

ಘಟನೆಯನ್ನು ಗಮನಿಸಿದ ಸ್ಥಳೀಯ ನಾಗರಿಕರು ಹಾಗೂ ಗೋಪ್ರೇಮಿಗಳು ತಕ್ಷಣ ಸ್ಪಂದಿಸಿ ಗಾಯಗೊಂಡಿರುವ ಎರಡು ಹಸುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈ ಗಾಯಾಳು ಗೋವುಗಳನ್ನು ರಿಪ್ಪನ್‌ಪೇಟೆಯ ಕೆನರಾ ಬ್ಯಾಂಕ್ ಹಾಗೂ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದು, ಸ್ಥಳೀಯರೇ ಅವುಗಳ ಆರೈಕೆ ಮಾಡುತ್ತಿದ್ದಾರೆ.


ಗೋವುಗಳ ಮಾಲೀಕರಿಗೆ ತುರ್ತು ಮನವಿ:

ಅಪಘಾತಕ್ಕೀಡಾಗಿರುವ ಹಸುಗಳ ಮಾಲೀಕರು ಯಾರಾದರೂ ಇದ್ದಲ್ಲಿ ತಕ್ಷಣವೇ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಬಳಿಗೆ ಬಂದು ತಮ್ಮ ಗೋವುಗಳನ್ನು ಕರೆದೊಯ್ದು ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಮಾಲೀಕರು ಪತ್ತೆಯಾಗದಿದ್ದಲ್ಲಿ ಗಾಯಾಳು ಗೋವುಗಳನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಬೇರೆ ಊರಿನ ಪ್ರಾಣಿ ಆಸ್ಪತ್ರೆಗೆ ಸ್ಥಳಾಂತರಿಸಲು ಸ್ಥಳೀಯರು ತೀರ್ಮಾನಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು