Advertisement

Responsive Advertisement

ಹೊಸನಗರದಲ್ಲಿ ಭಾರೀ ಗುಡುಗು–ಸಿಡಿಲು ಸಹಿತ ಮಳೆಯ ಅಬ್ಬರ: ಧರೆಗುರುಳಿದ ಆಂಜನೇಯ ಮಹಾದ್ವಾರ,


ಅನಿಸಿಕೆ ನ್ಯೂಸ್ (ಹೊಸನಗರ):

ಹೊಸನಗರ ಪಟ್ಟಣ ದಲ್ಲಿ  ಶುಕ್ರವಾರ ಸಂಜೆ ದಿಢೀರನೆ ಆರಂಭವಾದ ಭೀಕರ ಗಾಳಿ , ಗುಡುಗು-ಸಿಡಿಲಿನ ಮಳೆ  ಆರ್ಭಟಕ್ಕೆ ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಂಗವಾಗಿ ನಿಲ್ಲಿಸಲಾಗಿದ್ದ ಬೃಹತ್ ಆಂಜನೇಯ ಮಹಾದ್ವಾರ ನೆಲಕ್ಕುರುಳಿದೆ.

ಪಟ್ಟಣದ ಹಿಂದೂ ಮಹಾಸಭಾ ಗಣಪತಿ ಹಬ್ಬದ ಸಡಗರದ ಅಂಗವಾಗಿ ರಸ್ತೆಯಲ್ಲಿ ಸ್ವಾಗತ ಕಮಾನಾಗಿ ಆಂಜನೇಯ ಮಹಾದ್ವಾರವನ್ನು (ಕಟೌಟ್ ದ್ವಾರ) ನಿರ್ಮಿಸಲಾಗಿತ್ತು. ಆದರೆ ಸಂಜೆಯ ವೇಳೆಗೆ ಏಕಾಏಕಿ ವಾತಾವರಣ ಬದಲಾಗಿ ಬಿರುಗಾಳಿ, ಭೀಕರ ಗುಡುಗು ಹಾಗೂ ಮಿಂಚಿನ ಆರ್ಭಟ ತೀವ್ರಗೊಂಡ ಪರಿಣಾಮ ಈ ಬೃಹತ್ ದ್ವಾರವು ರಸ್ತೆಗೆ ಅಡ್ಡಲಾಗಿ ಧರೆಗುರುಳಿದೆ.

ತಪ್ಪಿದ ಭಾರೀ ಅನಾಹುತ – ಸಾರ್ವಜನಿಕರು ನಿರಾಳ:

ಮಹಾದ್ವಾರ ಕುಸಿದು ಬಿದ್ದ ಸಂದರ್ಭದಲ್ಲಿ ಅದೃಷ್ಟವಶಾತ್ ರಸ್ತೆಯಲ್ಲಿ ವಾಹನ ಸಂಚಾರವಾಗಲಿ, ಪಾದಚಾರಿಗಳಾಗಲಿ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯ ಹಾಗೂ ಅಪಾಯವು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆಗೆ ಬಿದ್ದ ಅವಶೇಷಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು