ಅನಿಸಿಕೆ ನ್ಯೂಸ್ (ರಿಪ್ಪನ್‌ಪೇಟೆ):
ಹೊಸನಗರದಲ್ಲಿ ಇದೇ ಅಕ್ಟೋಬರ್ 14 ರಂದು ಆಯೋಜಿಸಲಾಗಿರುವ ‘ಸೇವಾ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭ’ ಹಾಗೂ ‘ಮ್ಯಾರಥಾನ್’ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದ ಸಿದ್ಧತೆ ಹಾಗೂ ಯಶಸ್ವಿ ಆಯೋಜನೆಗಾಗಿ ನಾಳೆ, ಅಕ್ಟೋಬರ್ 07 (ಬುಧವಾರ) ಮಧ್ಯಾಹ್ನ 3:೦೦ ಗಂಟೆಗೆ ರಿಪ್ಪನ್‌ಪೇಟೆಯ ಹಿಂದೂ ಮಹಾಸಭಾ ಸಭಾಂಗಣದಲ್ಲಿ ಪ್ರಮುಖ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಪ್ರಮುಖ ನಾಯಕರ ನೇತೃತ್ವದಲ್ಲಿ ಸಭೆ:
ಈ ಪೂರ್ವಭಾವಿ ಸಭೆಯು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ನಡೆಯಲಿದ್ದು, ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮತ್ತು ಮಂಡಲ ಅಧ್ಯಕ್ಷರಾದ ಶ್ರೀ ಎನ್. ಸತೀಶ್ ಅವರ ಘನ ಉಪಸ್ಥಿತಿಯಲ್ಲಿ ಜರುಗಲಿದೆ.
ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಆಹ್ವಾನ:
ಸಭೆಗೆ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರುಗಳು, ಪ್ರಭಾರಿಗಳು, ಕಾರ್ಯದರ್ಶಿಗಳು, ಶಕ್ತಿ ಕೇಂದ್ರದ ಸಂಚಾಲಕರು, ಜಿಲ್ಲಾ-ತಾಲೂಕು-ರಾಜ್ಯ ಸಮಿತಿಯ ಪದಾಧಿಕಾರಿಗಳು, ಒಬಿಸಿ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಿಗದಿತ ಸಮಯಕ್ಕೆ ಸರಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕೆರೆಹಳ್ಳಿ ಮಹಾಶಕ್ತಿ ಕೇಂದ್ರ (ರಿಪ್ಪನ್‌ಪೇಟೆ) ಮುಖಂಡರು ಕೋರಿದ್ದಾರೆ.

.jpg)
0 ಕಾಮೆಂಟ್‌ಗಳು