Advertisement

Responsive Advertisement

ಗಾಂಧಿ ಜಯಂತಿ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ಸ್ವದೇಶಿ ಖಾದಿ ಬಟ್ಟೆಗಳ ಭರ್ಜರಿ ಪ್ರದರ್ಶನ ಹಾಗೂ ಮಾರಾಟ ಮೇಳ

ಅನಿಸಿಕೆ ನ್ಯೂಸ್ ರಿಪ್ಪನ್ ಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಶುಭ ಸಂದರ್ಭದಲ್ಲಿ, ಹೆಗ್ಗೋಡಿನ ಪ್ರಸಿದ್ಧ ‘ವಸ್ತ್ರ ವಿನ್ಯಾಸ ಕೇಂದ್ರ’ದ ವತಿಯಿಂದ ಸ್ವದೇಶಿ ನಿರ್ಮಿತ ಆಕರ್ಷಕ ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.


ಸ್ಥಳ: ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಹಿಂಭಾಗದಲ್ಲಿರುವ ಹಿಂದೂ ಮಹಾಸಭಾ ಸಭಾಂಗಣ, ರಿಪ್ಪನ್‌ಪೇಟೆ.


ಸಮಯ: ಇಂದು ಬೆಳಗ್ಗೆ 9:30 ರಿಂದ ರಾತ್ರಿ 8:30 ರವರೆಗೆ ಸಾರ್ವಜನಿಕರ ವೀಕ್ಷಣೆ ಮತ್ತು ಖರೀದಿಗೆ ಲಭ್ಯವಿರಲಿದೆ.


ನಮ್ಮ ನೆಲದ ಸೊಗಡನ್ನು ಮೈದುಂಬಿಕೊಂಡಿರುವ ಪರಿಸರಸ್ನೇಹಿ ಹಾಗೂ ಗುಣಮಟ್ಟದ ಸ್ವದೇಶಿ ಖಾದಿ ವಸ್ತ್ರಗಳನ್ನು ಕಣ್ತುಂಬಿಕೊಳ್ಳಲು ಮತ್ತು ಖರೀದಿಸಲು ಸಮಸ್ತ ಸಾರ್ವಜನಿಕರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು