ಶಿವಮೊಗ್ಗ / ರಿಪ್ಪನ್‌ಪೇಟೆ: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ "ನಮ್ಮೂರ ನಾಡಹಬ್ಬ ಯುವ ದಸರಾ – 2026" ಪ್ರಯುಕ್ತ ನಡೆದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಕ್ತ ದೇಹದಾರ್ಢ್ಯ ಸ್ಪರ್ಧೆಯಲ್ಲಿ
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪ್ರತಿಷ್ಠಿತ ವೇದಿಕೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ನೂರಾರು ದೇಹದಾರ್ಢ್ಯ ಪಟುಗಳು 55 ಕೆಜಿಯಿಂದ 90 ಕೆಜಿವರೆಗಿನ ವಿಭಾಗಗಳಲ್ಲಿ ಭಾಗವಹಿಸಿದ್ದರು
ಸತತ ಪರಿಶ್ರಮ, ನಿರಂತರ ಪ್ರಶಸ್ತಿಗಳ ಸರಮಾಲೆ:
ದೇಹದಾರ್ಢ್ಯ ಕ್ರೀಡೆಯು ಅಷ್ಟು ಸುಲಭದ ಹಾದಿಯಲ್ಲ. ದಿನನಿತ್ಯದ ಕಟ್ಟುನಿಟ್ಟಾದ ಜೀವನಶೈಲಿ, ವರ್ಷಗಟ್ಟಲೆಯ ಶ್ರಮ ಮತ್ತು ಅಚಲ ಶಿಸ್ತು ಇದಕ್ಕೆ ಅತ್ಯಗತ್ಯ. ಗಣೇಶ್ ಅವರಿಗೆ ಈ ಯಶಸ್ಸು ಆಕಸ್ಮಿಕವಾಗಿ ಬಂದಿದ್ದಲ್ಲ. ಈ ಹಿಂದೆಯೂ ಶಿವಮೊಗ್ಗ ಯುವ ದಸರಾ 2024, ಯುವ ದಸರಾ 2025 ಸ್ಪರ್ಧೆಗಳು ಸೇರಿದಂತೆ ತೀರ್ಥಹಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ "ಪರಶುರಾಮ ಕ್ಲಾಸಿಕ್" ಹಾಗೂ ಸ್ಥಳೀಯ ಹಲವು ಪ್ರತಿಷ್ಠಿತ ದೇಹದಾರ್ಢ್ಯ ವೇದಿಕೆಗಳಲ್ಲಿ ಸತತವಾಗಿ ಪಾಲ್ಗೊಂಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹಿನ್ನೆಲೆ ಇವರಿಗಿದೆ
ಗ್ರಾಮೀಣ ಭಾಗವಾದ ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಮಲೆನಾಡು ಪರಿಸರದಲ್ಲಿ ದೇಹದಾರ್ಢ್ಯ ಕ್ಷೇತ್ರದಲ್ಲಿ ಈ ಮಟ್ಟದ ನಿರಂತರ ಸಾಧನೆ ಮಾಡಿದವರು ವಿರಳ. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಮೈಕಟ್ಟು ರೂಪಿಸಿಕೊಳ್ಳುವಲ್ಲಿ ಯುವಜನತೆಗೆ ಮಾದರಿಯಾಗಿರುವ ಗಣೇಶ್, ರಿಪ್ಪನ್‌ಪೇಟೆಯ ಕೀರ್ತಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿಶ್ವಾಸ ಹೊಂದಿರುವ ಇವರ ಸಾಧನೆಗೆ ಸ್ಥಳೀಯ ಕ್ರೀಡಾಭಿಮಾನಿಗಳು, ಗ್ರಾಮಸ್ಥರು ಹಾಗೂ ಮಿತ್ರವೃಂದ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮ ಸಾಧನೆಯ ಹಿಂದಿರುವ ತಂದೆ-ತಾಯಿಯ ಅಚಲ ಪ್ರೋತ್ಸಾಹ ಹಾಗೂ ನಿರಂತರ ಶ್ರಮಕ್ಕೆ ದಾರಿದೀಪವಾದ ಜಿಮ್ ಗುರುಗಳ ಶ್ರೇಷ್ಠ ಮಾರ್ಗದರ್ಶನವನ್ನು ಗಣೇಶ್ ಅವರು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದಾರೆ."

.jpg)

.png)
0 ಕಾಮೆಂಟ್‌ಗಳು