Advertisement

Responsive Advertisement

ಶಿವಮೊಗ್ಗ ಬಳಿ ಹಳಿಗೆ ದನಗಳು ಸಿಲುಕಿ ಬೆಂಗಳೂರು–ತಾಳಗುಪ್ಪ ಇಂಟರ್‌ಸಿಟಿ ರೈಲು 1 ಗಂಟೆಗೂ ಹೆಚ್ಚು ಕಾಲ ವಿಳಂಬ: ನಿಲ್ದಾಣವಾರು ಆಗಮನ-ನಿರ್ಗಮನದ ಸಂಪೂರ್ಣ ವಿವರ ಇಲ್ಲಿದೆ!



KSR Bengaluru ನಿಲ್ದಾಣದಿಂದ 3.PM ಗೆ ಹೊರಟು  Talaguppa ಕಡೆಗೆ ತೆರಳುತ್ತಿದ್ದ ಬೆಂಗಳೂರು–ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಶಿವಮೊಗ್ಗ ಸಮೀಪದ ಕಾಶೀಪುರ ಫ್ಲೈ ಓವರ್ ಹಾಗೂ ಹುಚ್ಚರಾಯ ಕಾಲೋನಿ ಬಳಿ ದನಗಳು ಸಿಲುಕಿ ಡಿಕ್ಕಿಯಾದ ಪರಿಣಾಮ, ರೈಲು ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾರ್ಗಮಧ್ಯದಲ್ಲೇ ಸ್ಥಗಿತಗೊಂಡ ಘಟನೆ October 14 ರ ಸಂಜೆ ನಡೆದಿದೆ.


ಈ ದುರ್ಘಟನೆಯಿಂದಾಗಿ ನಿಗದಿತ ಸಮಯಕ್ಕಿಂತ ಸುಮಾರು 1 hour 30 minutes ತಡವಾಗಿ ರೈಲು ಸಂಚರಿಸಿದ್ದು, ಮಲೆನಾಡು ಭಾಗದ ನಿಲ್ದಾಣಗಳಾದ ಕುಂಸಿ, ಅರಸಾಳು, ಆನಂದಪುರಂ ಹಾಗೂ ಸಾಗರ ಜಂಬಗಾರು ತಲುಪುವ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.


ಪ್ರಮುಖ ನಿಲ್ದಾಣಗಳಲ್ಲಿ ರೈಲಿನ ನೈಜ ಆಗಮನ ಮತ್ತು ನಿರ್ಗಮನ ಸಮಯ (Live Schedule):

ರೈಲು ಬೆಂಗಳೂರಿನಿಂದ ಶಿವಮೊಗ್ಗ ತಲುಪುವವರೆಗೂ ಕೇವಲ 10 ರಿಂದ 15 minutes ನಷ್ಟು ಸಾಮಾನ್ಯ ವಿಳಂಬದಲ್ಲಿ ಸಂಚರಿಸುತ್ತಿತ್ತು. ಆದರೆ ಶಿವಮೊಗ್ಗ ನಿಲ್ದಾಣ ದಾಟಿದ ಬೆನ್ನಲ್ಲೇ ಅಪಘಾತ ಸಂಭವಿಸಿದ ಕಾರಣ ಮುಂದಿನ ಎಲ್ಲಾ ನಿಲ್ದಾಣಗಳಿಗೆ 1 ಗಂಟೆಗೂ ಹೆಚ್ಚು ತಡವಾಗಿ ತಲುಪಿದೆ

ಅಪಘಾತದ ಬಳಿಕ ಮಲೆನಾಡು ಭಾಗದ ನಿಲ್ದಾಣಗಳಲ್ಲಿ ಉಂಟಾದ ಭಾರಿ ವಿಳಂಬ:

Shivamogga Town ನಿಲ್ದಾಣದಿಂದ 07:14 PM ಗೆ ಹೊರಟ ರೈಲು, ಕಾಶೀಪುರ-ಹುಚ್ಚರಾಯ ಕಾಲೋನಿ ಬಳಿ 07:25 PM ಸುಮಾರಿಗೆ ಹಳಿಗೆ ದನಗಳು ಅಡ್ಡಬಂದ ಕಾರಣ 08:25 PM ವರೆಗೆ ಸ್ಥಳದಲ್ಲೇ ನಿಲ್ಲಬೇಕಾಯಿತು. ಪರಿಣಾಮವಾಗಿ ಮಲೆನಾಡು ಮಾರ್ಗದ ವೇಳಾಪಟ್ಟಿ ಸಂಪೂರ್ಣ ಏರುಪೇರಾಗಿದೆ:

  • Kumsi (ಕುಂಸಿ):

    ನಿಗದಿತ ಸಮಯ 07:30 PM ಬದಲಾಗಿ 08:53 PM ಕ್ಕೆ ತಲುಪಿದ್ದು, 1 hr 23 min ತಡವಾಗಿದೆ.

  • Arasalu (ಅರಸಾಳು):

    ಸಾಮಾನ್ಯವಾಗಿ ಸಂಜೆ 07:45 PM - 07:50 PM ಸುಮಾರಿಗೆ ಬರುತ್ತಿದ್ದ ರೈಲು, ಅಪಘಾತದ ತೆರವು ಕಾರ್ಯಾಚರಣೆಯ ಕಾರಣದಿಂದಾಗಿ ರಾತ್ರಿ 09:16 PM ಕ್ಕೆ ತಲುಪಿದ್ದು, ಬರೋಬ್ಬರಿ 1 hr 31 min ವಿಳಂಬವಾಗಿದೆ.

  • Kenchanala  (ಕೆಂಚನಾಳ ):

    ನಿಗದಿತ ಸಮಯ 07:50 PM ಬದಲಾಗಿ 09:18 PM ಕ್ಕೆ ಆಗಮಿಸಿದೆ (1 hr 29 min Late).

  • Anandapuram (ಆನಂದಪುರಂ):

    ನಿಗದಿತ ಸಮಯ 08:03 PM ಬದಲಾಗಿ ರಾತ್ರಿ 09:24 PM ಕ್ಕೆ ಬಂದಿದೆ.

  • Sagara Jambagaru (ಸಾಗರ ಜಂಬಗಾರು):

    ಸಾಮಾನ್ಯವಾಗಿ ರಾತ್ರಿ 08:33 PM ಗೆ ತಲುಪಬೇಕಿದ್ದ ರೈಲು, ರಾತ್ರಿ 09:57 PM ಕ್ಕೆ ಪ್ಲಾಟ್‌ಫಾರ್ಮ್ 2 (PF 2) ತಲುಪಿದೆ.

ಪ್ರಯಾಣಿಕರ ಪರದಾಟ:

ಅರಸಾಳು, ಕುಂಸಿ, ಆನಂದಪುರಂ ಮತ್ತು ಸಾಗರ ಭಾಗಕ್ಕೆ ತೆರಳಬೇಕಿದ್ದ ನಿತ್ಯ ಪ್ರಯಾಣಿಕರು, ಉದ್ಯೋಗಿಗಳು ಹಾಗೂ ಊರಿಗೆ ತೆರಳುತ್ತಿದ್ದ ಸಾರ್ವಜನಿಕರು ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಸುಮಾರು ಒಂದೂವರೆ ಗಂಟೆ ಕಾಲ ಕಾಯುವಂತಾಯಿತು. ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹಳಿಯನ್ನು ತ್ವರಿತವಾಗಿ ತೆರವುಗೊಳಿಸಿದ ಬಳಿಕ ರೈಲು ಸಂಚಾರ ಮುಂದುವರಿಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು