ಅನಿಸಿಕೆ ನ್ಯೂಸ್ ರಿಪ್ಪನ್ಪೇಟೆ.
ಮಲೆನಾಡು ಭಾಗದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ರಿಪ್ಪನ್ಪೇಟೆಯ ಶ್ರೀ ಹಿಂದೂ ಮಹಾಸಭಾ ಗಣಪತಿ ಉತ್ಸವವು ಈ ಬಾರಿ 59ನೇ ವರ್ಷಕ್ಕೆ ಕಾಲಿಟ್ಟಿದ್ದು, ಎಂದಿನಂತೆ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರುತ್ತಿದೆ.
ಈ ಐತಿಹಾಸಿಕ ಉತ್ಸವದ ಅಂಗವಾಗಿ ಬಿಜೆಪಿ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಹರತಾಳು ಹಾಲಪ್ಪನವರು ರಿಪ್ಪನ್ಪೇಟೆಯ ಗಣಪತಿ ಪೆಂಡಾಲ್ಗೆ ಆಗಮಿಸಿ, ಮಹಾಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಉತ್ಸವದ ಯಶಸ್ಸಿಗೆ ಶುಭ ಹಾರೈಸಿದರು.
ಸೆಪ್ಟೆಂಬರ್ 24ರ ಗುರುವಾರ ಭವ್ಯ ವಿಸರ್ಜನೆ:
ಕಳೆದ ಹಲವು ದಿನಗಳಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ಜರುಗುತ್ತಿರುವ 59ನೇ ವರ್ಷದ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾದ ಗಣಪತಿ ವಿಸರ್ಜನಾ ಮಹೋತ್ಸವವು ಇದೇ ಸೆಪ್ಟೆಂಬರ್ 24ರ ಗುರುವಾರದಂದು ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಶೋಭಾಯಾತ್ರೆ ಸಾಗಲಿದ್ದು, ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪನವರು, "ನಾಡಿನ ಜನತೆಗೆ ಗಣೇಶನ ಕೃಪೆಯಿಂದ ಸುಖ, ಶಾಂತಿ, ಸಮೃದ್ಧಿ ಸಿಗಲಿ. 59 ವರ್ಷಗಳಿಂದ ರಿಪ್ಪನ್ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಉತ್ಸವವನ್ನು ಎಲ್ಲರೂ ಒಗ್ಗಟ್ಟಾಗಿ, ಶಿಸ್ತಿನಿಂದ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ" ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸಮಸ್ತ ಭಕ್ತರಿಗೆ ಹಾಗೂ ಆಯೋಜಕರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿಯ ಮುಖಂಡರು, ಪ್ರಮುಖ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ನಿಖರ ಹಾಗೂ ಕ್ಷಣಕ್ಷಣದ ಸ್ಥಳೀಯ ಸುದ್ದಿಗಳಿಗಾಗಿ 'ಅನಿಸಿಕೆ ನ್ಯೂಸ್' ಫಾಲೋ ಮಾಡಿ.


0 ಕಾಮೆಂಟ್ಗಳು